ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕನ್ನಡದ ನಟರಲ್ಲಿ ಅತಿ ದುಬಾರಿ ನಟ ಎನಿಸಿದ್ದರು. ಚಿತ್ರರಂಗದಲ್ಲಿ ಹೆಚ್ಚು ಸಂಬಾವನೆ ಪಡೆಯುವ ಈ ನಟ ಇದೀಗ ಲಗ್ಸುರಿ ಕಾರ್ ನ ಒಡೆಯರಾಗಿದ್ದಾರೆ. ದರ್ಶನ್ ಸಂಕ್ರಾಂತಿ ಹಬ್ಬದ ದಿನ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ.
ಇತ್ತೀಚೆಗೆ ಟೆಸ್ಟ್ ಡ್ರೈವ್ ನೋಡಿದ್ದ ಕಾರ್ ಅನ್ನು ದರ್ಶನ್ ಕೊಂಡುಕೊಂಡಿದ್ದು ಹೊಸ ಕಾರ್ ನಲ್ಲಿ ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಮೊದಲಿಂದಲೂ ಕಾರ್ ಗಳೆಂದರೆ ಹೆಚ್ಚು ಪ್ರೀತಿ ಇರುವ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್ ಸೇರಿ ಅನೇಕ ಕಾರ್ ಗಳಿವೆ. ಆದರೆ ಇದೀಗ ಲ್ಯಾಂಬೋರ್ಗಿನಿ ಸೇರ್ಪಡೆಯಿಂದ ದರ್ಶನ್ ಕಾರ್ ಸಂಗ್ರಹಕ್ಕೆ ಹೊಸ ಮೆರುಗು ಬಂದಿದೆ.
ಈ ನೂತನ ಕಾರ್ ನ ಬೆಲೆ 5 ಕೋಟಿ ರೂ. ಎನ್ನಲಾಗಿದ್ದು ಕೆಲವೇ ಕೆಲವು ಗಣ್ಯರ ಬಳಿ ಈ ಕಾರ್ ಇದೆ.ಇನ್ನು ಸ್ಯಾಂಡಲ್ ವುಡ್ ನಲ್ಲಿ ಲ್ಯಾಂಬೋರ್ಗಿನಿ ಕಾರ್ ಹೊಂದಿದ ಏಕಮಾತ್ರ ನಟ ಎನ್ನುವ ಹಿರಿಮೆ ದರ್ಶನ್ ಪಾಲಾಗಿದೆ. ಇದಕ್ಕೂ ಹಿಂದೆ ದರ್ಶನ್ ತಮ್ಮ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದರು.
ಪ್ರಸ್ತುತ ಮುನಿರತ್ನ ಅವರ ಕುರುಕ್ಜ್ಷೇತ್ರದಲ್ಲಿ ಅಭಿನಯಿಸುತ್ತಿರುವ ದರ್ಶನ್ ಅವರ ಐವತ್ತೊಂದನೇ ಚಿತ್ರದ ಮಹೂರ್ತ ಸಹ ಸಂಕ್ರಾಂತಿ ಹಬ್ಬದಂದೇ ನಡೆದಿತ್ತು.
Comments
Post a Comment